ಸೌಹಾರ್ದ ಸಹಕಾರಿಯ ಕ್ಷೇತ್ರದಲ್ಲಿಯೇ ನಮ್ಮ ಶ್ರೀ ವಿಷ್ಣು ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯು ಉತ್ತಮ ಸೇವೆಯನ್ನು ನೀಡುವ ಆಶಯದೊಂದಿಗೆ ನಾವು ಧಾರವಾಡದ ಕೇಂದ್ರ ಭಾಗವಾದ ಜುಬಿಲಿ ಸರ್ಕಲ್‍ನಲ್ಲಿ ನಾವು 2019ರಲ್ಲಿ ಪ್ರಾರಂಭಿಸಿದ್ದು, 1200ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹಾಗೂ ರಾಜ್ಯದ ತುಂಬಾ ನಮ್ಮ ಸಹಕಾರಿಯ ಶಾಖೆಗಳನ್ನು ಹೊಂದುವ ಬಯಕೆಯನ್ನು ನಾವು ಹೊಂದಿದ್ದು ರಾಜ್ಯದ ಜನರ ಸೇವೆಗೆ ನಮ್ಮ ಸಹಕಾರಿಯು ಕಾರ್ಯ ಪ್ರವೃತ್ತವಾಗಿದೆ.
ನಮ್ಮ ಸಹಕಾರಿಯ ಸದಸ್ಯರು ಸಹಕಾರಿಯ ಪ್ರತಿಯೊಂದು ಆಗು-ಹೋಗುಗಳ ಬಗ್ಗೆ ದಿನನಿತ್ಯದ ಸಂಗತಿಗಳ ಬಗ್ಗೆ ಕೂಲಕುಷವಾಗಿ ಸಹಕಾರಿಯ ಅಭಿವೃದ್ಧಿಯ ಜೊತೆಗೆ ಪಾರದರ್ಶಕವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ನಾವು ಅಳವಡಿಸಿಕೊಂಡು ನಡೆಯುವ ಆಶಯವನ್ನು ಹೊಂದಿದೆ. ನಮ್ಮ ಸಹಕಾರಿಯಲ್ಲಿ ಗ್ರಾಹಕರ ಸೇವೆಯ ಜೊತೆಗೆ ಸದಸ್ಯರ ಮಕ್ಕಳಿಗೆ ಭವಿಷ್ಯ ನಿಧಿಯನ್ನು ನಾವು ನೀಡುತ್ತಿದ್ದು, 10 ವರ್ಷದ ಒಳಗಿನ ಮಕ್ಕಳು ಇದರ ಉಪಯೋಗವನ್ನು ಪಡೆಯುಬಹುದು.
ಇದರ ಜೊತೆಗೆ ಸಮಾನ್ಯವಾಗಿ ಎಲ್ಲಾ ಸಹಕಾರಿಯಗಳಲ್ಲಿ ನೀಡುವ ಜೊತೆಗೆ ನಾವು ಸಹ : -
· ಉಳಿತಾಯ ಖಾತೆ
· ಮುದ್ದತ್ತಿ ಖಾತೆ
· ಆರ್.ಡಿ. ಖಾತೆ
· ಗುಂಪು ಉಳಿತಾಯ ಖಾತೆ
· ಮಕ್ಕಳ ಉಜ್ವಲ ಭವಿಷ್ಯದ ಖಾತೆ
· ಇ-ಸ್ಟಾಂಪಿಂಗ್ ಸೇವೆ
· ಇತರೆ ಸೇವೆಗಳು